ಬಳ್ಳಾರಿಯಲ್ಲಿ 500 ಅಡಿ ಉದ್ದದ ಕನ್ನಡ ಧ್ವಜದ ಮೆರವಣಿಗೆ - 500 ಅಡಿ ಉದ್ದದ ಕನ್ನಡ ಧ್ವಜ ಮೆರವಣಿಗೆ ಲೆಟೆಸ್ಟ್ ನ್ಯೂಸ್
ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಇಂದು ಕನ್ನಡ ರಾಜ್ಯೋತ್ಸವ ಅಂಗವಾಗಿ ಸುಮಾರು 500 ಅಡಿ ಉದ್ದದ ಕನ್ನಡ ಧ್ವಜವನ್ನು ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಿಡಿದು ದಾರಿ ಉದ್ದಕ್ಕೂ ಮೆರವಣಿಗೆ ಮಾಡಿದರು. ನಗರದ ಕನ್ನಡ ರಕ್ಷಣಾ ವೇದಿಕೆಯಿಂದ ಇಂದು ಮೋತಿ ವೃತ್ತದಿಂದ ರಾಯಲ್ ಮಾರ್ಗವಾಗಿ ಬಿಡಿಎ ಮೈದಾನದವರೆಗೂ ಈ ಮೆರವಣಿಗೆ ಸಾಗಿತು. ಈ ವೇಳೆ ವಾಟಳ್ ನಾಗರಾಜ್ ಮಾತನಾಡಿ, ಸರ್ಕಾರಗಳಿಗೆ ಕನ್ನಡ ಬೇಕಾಗಿಲ್ಲ. ಕನ್ನಡದ ಬಾವುಟ ಬೇಕಾಗಿಲ್ಲ. ಈ ಸರ್ಕಾರಗಳು ಅಧಿಕಾರ ಮದದಿಂದ ಪ್ರಜಾಪ್ರಭುತ್ವ ನಾಶ ಮಾಡುವ ಕೆಲಸ ಮಾಡುತ್ತಿವೆ ಎಂದು ದೂರಿದರು.