ಸಿದ್ದಶ್ರೀ ಉತ್ಸವ: ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಮಧುಶ್ರೀಯಿಂದ ಕನ್ನಡ ಗೀತೆ - ಬಾಗಲಕೋಟೆ ಸುದ್ದಿ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸಿದ್ದನಕೊಳ್ಳ ಮಠದ ವತಿಯಿಂದ ಆಯೋಜಿಸಿದ್ದ ಸಿದ್ದಶ್ರೀ ಉತ್ಸವದಲ್ಲಿ ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಮಧುಶ್ರೀ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು. ಬಾಹುಬಲಿ ಹಾಗೂ ಶಿವಾಜಿ ಚಲನಚಿತ್ರ ದಲ್ಲಿ ಹಿನ್ನೆಲೆ ಗಾಯಕಿಯಾಗಿದ್ದ ಮಧುಶ್ರೀ ಅವರು ಬಾಂಬೆಯ ಅವರ ತಂಡದ ಮೂಲಕ ಹಿಂದಿ ಗಾಯನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಸಿದ್ದನಕೊಳ್ಳದ ಸಿದ್ದಪ್ಪಜ್ಜ ಪವಾಡ ಹೇಳುವ ನಮನ ಗೀತೆಯನ್ನು ಕನ್ನಡದಲ್ಲಿ ಹೇಳುವ ಮೂಲಕ ಕಾರ್ಯಕ್ರಮ ಪ್ರಾರಂಭವಾಗಿ, ಮೈನೆ ಪ್ಯಾರ ಕೀಯಾ.ರಾಜಾ ಹಿಂದುಸ್ತಾನ್, ತಾಳ ಹಿಂದಿ ಚಲನಚಿತ್ರ ಗೀತೆ ಸೇರಿದಂತೆ ಇತರ ಗೀತೆಯನ್ನು ಹಾಡಿ,ಪೇಕ್ಷರ ಮನ ಸೆಳೆದರು. ತಾಳಕ್ಕೆ ತಕ್ಕಂತೆ ಕುಣಿಯುವ ಮೂಲಕ ಪೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.