ತುಮಕೂರಲ್ಲಿ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಶಾಲಾ ಮುಖ್ಯ ಶಿಕ್ಷಕ - ಲೆಟೆಸ್ಟ್ ತುಮಕೂರು ನ್ಯೂಸ್
ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ವತಃ ಮುಖ್ಯ ಶಿಕ್ಷಕರೇ ಪುಟ್ಟ ಮಕ್ಕಳನ್ನು ಹುರಿದುಂಬಿಸುವ ಸಲುವಾಗಿ ಕನ್ನಡ ಗೀತೆಗೆ ಹೆಜ್ಜೆ ಹಾಕಿದ ಸ್ವಾರಸ್ಯಕರ ಘಟನೆ ತುಮಕೂರಿನ ಕೆಂಚಗಾನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕಂಡು ಬಂದಿದೆ. ಕನ್ನಡ ಕಂಪನ್ನು ಸಾರುವ ಸಲುವಾಗಿ ಶಾಲಾ ಮುಖ್ಯ ಶಿಕ್ಷಕರಾದ ರಾಮಾಂಜಿನೇಯ ಅವರು ನಾವಾಡುವ ನುಡಿಯೇ ಕನ್ನಡ ನುಡಿ ಸಿರಿಗನ್ನಡ ನುಡಿ ಎಂಬ ಹಾಡಿಗೆ ಹೆಜ್ಜೆ ಹಾಕಿ ಪುಟಾಣಿ ಮಕ್ಕಳನ್ನು ಕೂಡ ಕುಣಿಸಿದ್ದಾರೆ. ರಾಮಾಂಜಿನಪ್ಪ ಅವರು ತಮ್ಮ ಶಾಲೆಯಲ್ಲೂ ಕೂಡ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಿಸುವ ದೃಷ್ಟಿಯಿಂದ ಕನ್ನಡದ ಗೀತೆಗೆ ಹೆಜ್ಜೆ ಹಾಕಿರುವುದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.