ಬಣ್ಣ ಬಳಿದುಕೊಂಡು ವಿಶೇಷವಾಗಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದ ಕನ್ನಡಾಭಿಮಾನಿ... - ವಿಶೇಷ ಕನ್ನಡಾಭಿಮಾನಿ ಬೆಳಗಾವಿ
ಬೆಳಗಾವಿ: ಕನ್ನಡ ರಾಜ್ಯೋತ್ಸದ ನಿಮಿತ್ತ ಮೈತುಂಬ ಕೆಂಪು ಮತ್ತು ಹಳದಿ ಬಣ್ಣವನ್ನು ಬಳಿದುಕೊಂಡ ಕನ್ನಡ ಅಭಿಮಾನಿಯೊಬ್ಬರು ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಜಿಲ್ಲೆಯ ಮೂಡಲಗಿ ತಾಲೂಕಿನ ಮಂಜುನಾಥ ಎಂಬ ಯುವ ಕನ್ನಡಾಭಿಮಾನಿ ಎಲ್ಲೆಡೆ ಕನ್ನಡದ ಕಂಪು ಸೂಸಬೇಕೆಂಬ ಧ್ಯೇಯದೊಂದಿಗೆ ರಾಜ್ಯದ 30 ಜಿಲ್ಲೆಗಳಲ್ಲಿ ಕನ್ನಡದ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಇದರ ಜೊತೆಗೆ ಜವಾರಿ ಬಳಸಿ, ಕೊರೊನಾ ಓಡಿಸಿ ಕರ್ನಾಟಕ ಜಾಗೃತಿ ಆಂದೋಲನದ ಬರಹವನ್ನು ಮೈಮೇಲೆ ಬಳಿದುಕೊಂಡು ಕೊರೊನಾ ಜಾಗೃತಿ ಕೂಡ ಮಾಡುತ್ತಿದ್ದಾರೆ. ಈತ ವೃತ್ತಿಯಲ್ಲಿ ಸಿನಿಮಾ ಕಲಾವಿದನಾಗಿದ್ದರೂ ಕನ್ನಡ ಹಾಗೂ ಕೊರೊನಾ ಜಾಗೃತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಒನ್ ಮ್ಯಾನ್ ಆರ್ಮಿಯಂತೆ ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಜಾಗೃತಿಗೆ ಮುಂದಾಗಿದ್ದಾರೆ.