ಶಾಲೆ ಆರಂಭದ ಜತೆಗೇ ಶಿಕ್ಷಕರ ಬಗ್ಗೆಯೂ ಇರಲಿ ಕಾಳಜಿ: ಕ್ಯಾಮ್ಸ್ ಕಾರ್ಯದರ್ಶಿ - ಡಿಸೆಂಬರ್ವರೆಗೆ ಶಾಲೆ ಆರಂಭ ಇಲ್ಲ
ಬೆಂಗಳೂರು: ಕೋವಿಡ್ ಸೋಂಕು ಎರಡನೇ ಅಲೆ ಈ ಚಳಿಗಾಲದಲ್ಲಿ ಹೆಚ್ಚಾಗಲಿದ್ದು, ಈ ಕಾರಣದಿಂದ ಡಿಸೆಂಬರ್ವರೆಗೆ ಶಾಲೆ ಆರಂಭ ಬೇಡ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಕ್ಯಾಮ್ಸ್ ಸದಸ್ಯರು ಸಭೆ ನಡೆಸಿದ್ದು, ಶಾಲೆ ಆರಂಭದ ಬಗ್ಗೆ ಅಷ್ಟೇ ಚಿಂತನೆ ಮಾಡಿದರೆ ಉಪಯೋಗವಿಲ್ಲ. ಬದಲಿಗೆ ಶಿಕ್ಷಕರ ಬಗ್ಗೆಯೂ ಕಾಳಜಿ ಇರಲಿ ಎಂದು ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಮನವಿ ಮಾಡಿದ್ದಾರೆ. ಜೂನ್ನಿಂದ ಇಲ್ಲಿಯವರೆಗೆ ಆನ್ಲೈನ್ ಕ್ಲಾಸ್ ನಡ್ತಿದೆ. ಇದಕ್ಕೆ ತಗಲುವ ವೆಚ್ಚದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಶಿಕ್ಷಕರ ಪಾಡು ಕೇಳುವವರು ಯಾರು ಇಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಹೀಗೆ ನಮ್ಮನ್ನ ಕಡೆಗಣಿಸಿದರೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.