ಕಾಳಜಿ ಕೇಂದ್ರದಲ್ಲಿ ಉಪವಾಸ ಕುಳಿತ ನೆರೆ ಸಂತ್ರಸ್ತರು: ಅಧಿಕಾರಿಗಳ ವಿರುದ್ಧ ಆಕ್ರೋಶ - ಅಧಿಕಾರಿಗಳ ವಿರುದ್ಧ ನೆರೆ ಸಂತ್ರಸ್ತರ ಆಕ್ರೋಶ
ಮನೆ ಮಠ ಕಳೆದುಕೊಂಡ ನೆರೆ ಸಂತ್ರಸ್ತರು ಕಾಳಜಿ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಸಿಗದೇ ಪರದಾಡುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹೊಳೆ ಬೋಸಗಾದಲ್ಲಿ ಭೀಮಾ ನದಿ ಪ್ರವಾಹ ನುಗ್ಗಿ ಸುಮಾರು 200ಕ್ಕೂ ಅಧಿಕ ಕುಟುಂಬಸ್ಥರು ನಿರಾಶ್ರಿತರಾಗಿದ್ದಾರೆ. ಭೋಸಗಾ ಶಾಲೆಯಲ್ಲಿ ಆಶ್ರಯ ಪಡೆದಿರುವ ಈ ಸಂತ್ರಸ್ತರು ನಿನ್ನೆಯಿಂದ ತಿಂಡಿ, ಊಟ ಸಿಗದೇ ಉಪವಾಸ ಕುಳಿತಿದ್ದಾರೆ. ಆದರೆ, ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ಯಾರೂ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.