ಲಾಕ್ ಡೌನ್ಗೆ ಕಲಬುರಗಿಯಲ್ಲಿ ಫುಲ್ ಸಪೋರ್ಟ್ - ಭಾರತ್ ಲಾಕ್ಡೌನ್
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಭಾರತ್ ಲಾಕ್ಡೌನ್ಗೆ ಕಲಬುರಗಿ ಜನತೆ ಸ್ಪಂದಿಸಿದ್ದಾರೆ. ನಿನ್ನೆ ಪೊಲೀಸರು ಲಾಠಿ ರುಚಿಗೆ ಹೆದರಿದ ಜನತೆ ಇಂದು ಸ್ವಯಂ ಪ್ರೇರಣೆಯಿಂದ ಮನೆಯಿಂದ ಹೊರಗೆ ಬಾರದೇ ಸ್ಪಂದನೆ ನೀಡಿದ್ದಾರೆ. ಜಿಲ್ಲಾಡಳಿತದ ಸೂಚನೆಯಂತೆ ಬೆಳಗ್ಗೆ 8-30 ರವರೆಗೆ ದಿನಸಿ ಖರೀದಿಸಿ ಮನೆ ಸೇರಿಕೊಂಡಿದ್ದಾರೆ. ವ್ಯಾಪಾರ ವಹಿವಾಟ ಸಂಪೂರ್ಣ ಬಂದ್ ಆಗಿದೆ. ಬೆರಳೆಣಿಕೆಯಷ್ಟು ಜನರು ಮಾತ್ರ ರಸ್ತೆಗೆ ಇಳಿದಿದ್ದು,ಅವರನ್ನು ಪೊಲೀಸರು ಮನೆಗೆ ಕಳಿಸುವ ದೃಶ್ಯ ಕಂಡು ಬರುತ್ತಿದೆ.