ಕರ್ನಾಟಕ

karnataka

ETV Bharat / videos

ಅಗತ್ಯ ವಸ್ತುಗಳ ಖರೀದಿಗೆ 3.5 ತಾಸು ಅವಕಾಶ ಮಾಡಿಕೊಟ್ಟ ಕಲಬುರಗಿ ಜಿಲ್ಲಾಡಳಿತ

By

Published : Mar 25, 2020, 11:04 AM IST

ಕಲಬುರಗಿ: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೆಶನದಂತೆ ಭಾರತದಲ್ಲಿ ಲಾಕ್‌ಡೌನ್ ಜಾರಿಯಾಗಿದೆ. ಕಲಬುರಗಿಯಲ್ಲಿ ಜಿಲ್ಲಾಡಳಿತ ಬೆಳಗ್ಗೆ 5 ಗಂಟೆಯಿಂದ 8-30ರ ವರೆಗೆ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅನುವು ಮಾಡಿಕೊಟ್ಟಿತ್ತು. ಜಿಲ್ಲೆಯಲ್ಲಿ ಹಾಲು, ತರಕಾರಿ, ದಿನಸಿ ಅಂಗಡಿಗಳು ಮಾತ್ರ ಓಪನ್ ಆಗಿದ್ದವು. ಪರಸ್ಪರ ಅಂತರ ಕಾಯ್ದುಕೊಂಡು ಜನತೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ನಗರದ ಎಮ್‌ಎಸ್‌ಕೆ ಮಿಲ್ ಮಾರ್ಕೆಟ್ ನಲ್ಲಿ ಹಬ್ಬದ ಹಿನ್ನೆಲೆ ತರಕಾರಿ ಖರಿದಿಸಲು ಜನ ಮುಗಿಬಿದ್ದಿದ್ದರು. ನಿನ್ನೆ ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿದ ಹಿನ್ನೆಲೆ ಇಂದು ಜನಸ್ತೋಮ ಕೊಂಚ ಕಡಿಮೆ ಕಂಡುಬಂತು. 8-30ಕ್ಕೆ ಪೊಲೀಸರು ತರಕಾರಿ ಮಾರಾಟವನ್ನು ಸ್ಥಗಿತಗೊಳಿಸಿ ಜನರನ್ನು ಚದುರಿಸಿದ್ದಾರೆ. ನಗರದಾದ್ಯಂತ ಅಂಗಡಿ-ಮುಂಗಟ್ಟುಗಳು ಬಂದ್ ಮಾಡಲಾಗಿದೆ. ಬೆರಳೆಣಿಕೆಯಷ್ಟು ಆಟೋಗಳ ಸಂಚಾರ ಕಂಡುಬಂದಿತ್ತು. 9 ಗಂಟೆ ನಂತರ ಎಲ್ಲವೂ ಸ್ತಬ್ಧವಾಗಿದೆ.

ABOUT THE AUTHOR

...view details