ಕಲಬುರಗಿ ಮಾಜಿ ಕಾರ್ಪೊರೇಟರ್ಗಳ ಜಾಣ ಕುರುಡು: ಚುನಾವಣೆಗಾಗಿ ಕಾದಿರುವವರಿಗೆ ಕಾನೂನಿನ ಉರುಳು? - ಕಲಬುರಗಿ ಮಹಾನಗರ ಪಾಲಿಕೆ
ಕಲಬುರಗಿ ಮಹಾನಗರ ಪಾಲಿಕೆಯನ್ನು ಸದ್ಯ ಆಡಳಿತಾಧಿಕಾರಿ ನಡೆಸುತ್ತಿದ್ದಾರೆ. ಚುನಾವಣೆ ಉತ್ಸಾಹದಲ್ಲಿರುವ ಮಾಜಿ ಕಾರ್ಪೊರೇಟರ್ಗಳು ಕೋರ್ಟ್ನ ತಡೆಯಾಜ್ಞೆ ತೆರವು ಆದೇಶಕ್ಕೆ ಕಾಯುತ್ತಿದ್ದಾರೆ. ಆದರೆ ಅಧಿಕಾರದಲ್ಲಿದ್ದಾಗ ಆಸ್ತಿ ವಿವರ ಸಲ್ಲಿಕೆ ಬಗ್ಗೆ ಜಾಣಕುರುಡು ಪ್ರದರ್ಶಿಸಿ ಬೇಜವಾಬ್ದಾರಿತನ ತೋರಿದ ಸದಸ್ಯರಿಗೆ ಇದೀಗ ಕಾನೂನು ಉರುಳಾಗುವ ಸಾಧ್ಯತೆ ದಟ್ಟವಾಗಿದೆ.