ಕಾಗಿನೆಲೆ ಕೆರೆ ಭರ್ತಿ... ಬ್ಯಾಡಗಿ ಜನತೆಯ ಮೊಗದಲ್ಲಿ ಮಂದಹಾಸ - ಕಾಗಿನೆಲೆ ಕೆರೆ ನ್ಯೂಸ್
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಐತಿಹಾಸಿಕ ಕಾಗಿನೆಲೆ ಕೆರೆ ತುಂಬಿದ್ದು, ಕೆರೆ ಕೋಡಿ ಒಡೆದಿದೆ. ವರದಾ ನದಿಯಿಂದ ಕಾಗಿನೆಲೆ ಕೆರೆಗೆ ನೀರು ಬಿಟ್ಟಿದ್ದರಿಂದ ಕೆರೆ ತುಂಬಿ ಕೋಡಿ ಒಡೆದು ಹರಿಯುತ್ತಿದೆ. ಇದರಿಂದ ಕಾಗಿನೆಲೆಗೆ ಬರೋ ಪ್ರವಾಸಿಗರು ಹಾಗೂ ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಹರಿಯೋ ನೀರಿನಲ್ಲಿ ಸ್ಥಳೀಯರು ತಮ್ಮ ತಮ್ಮ ವಾಹನಗಳನ್ನು ಸ್ವಚ್ಛಗೊಳಿಸುವಲ್ಲಿ ನಿರತರಾಗಿದ್ದಾರೆ.