ಅಕ್ಕಿ ಗೋದಾಮಗಳಿಗೆ ಭೇಟಿ ನೀಡಿದ ಕಾಗವಾಡ ತಹಶೀಲ್ದಾರ್ - Chikkodi in Belgaum District
ಚಿಕ್ಕೋಡಿ: ಮಹಾರಾಷ್ಟ್ರ- ಕರ್ನಾಟಕ ಗಡಿಭಾಗದ ಕಾಗವಾಡ ತಾಲೂಕಿನ ಅಕ್ಕಿ ಸಂಗ್ರಹ ಗೋದಾಮುಗಳಿಗೆ ಜಿಲ್ಲೆಯ ಕಾಗವಾಡ ತಾಲೂಕಿನ ಆಹಾರ ಅಧಿಕಾರಿ ಸಂತೋಷ ಬುದಾರ್ ಹಾಗೂ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಗವಾಡ ಹಾಗೂ ಅಥಣಿ ತಾಲೂಕಿನಲ್ಲಿ ಹೆಚ್ಚಾಗಿ ಅಕ್ರಮ ಅನ್ನಭಾಗ್ಯ ಅಕ್ಕಿ ಸಾಗಾಟ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ.