ಮತಬೇಟೆಯ ಮಧ್ಯೆ ಮುದ್ದೆ, ಸೊಪ್ಪು ಸಾರು ಸವಿದ ನಿಖಿಲ್, ಕಾರ್ಯಕರ್ತರ ಉತ್ಸಾಹಕ್ಕೆ ಫುಲ್ ಫಿದಾ - ಕಾರ್ಯಕರ್ತ
ಚುನಾವಣಾ ಪ್ರಚಾರದಿಂದ ದಣಿದಿದ್ದ ನಿಖಿಲ್, ಮಳವಳ್ಳಿ ತಾಲೂಕಿನ ದನಗೂರಿನಲ್ಲಿರುವ ಗ್ರಾ.ಪಂ. ಮಾಜಿ ಅಧ್ಯಕ್ಷರ ಮನೆಯಲ್ಲಿ ಮುದ್ದೆ, ಸೊಪ್ಪು ಸಾರು ಊಟ ಸವಿದರು. ನನ್ನ ತಾತ, ಹೆಚ್.ಡಿ ದೇವೇಗೌಡರ ಪ್ರಿಯವಾದ ಆಹಾರ ಮುದ್ದೆ, ಸೊಪ್ಪು ಸಾರು. ಇದು ಆರೋಗ್ಯಕ್ಕೂ ಉತ್ತಮ. ನಂಗಿಷ್ಟವಾದ ಆಹಾರ. ಕಾರ್ಯಕರ್ತರ ಮಧ್ಯೆ ಕುಳಿತು ಊಟ ಮಾಡುತ್ತಿರುವುದು ಸಂತಸ ತಂದಿದೆ ಎಂದರು.