ಗೆಲುವಿನ ನಗೆ ಬೀರಿದ ನಂತರ ಡಾ. ಕೆ ಸುಧಾಕರ್ ಹೇಳಿದ್ದೇನು? - ಚಿಕ್ಕಬಳ್ಳಾಪುರ ಉಪಚುನಾವಣೆ ಫಲಿತಾಂಶ
ಚಿಕ್ಕಬಳ್ಳಾಪುರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ ಕೆ. ಸುಧಾಕರ್ ಗೆಲುವಿನ ನಗೆಯನ್ನು ಬೀರಿದ್ದಾರೆ. ಒಟ್ಟು 84,389 ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದ್ದಾರೆ. ಸುಧಾಕರ್ ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರದ ನಾಯಕರು ಯಾವ ಸಚಿವ ಸ್ಥಾನವನ್ನು ನೀಡುತ್ತಾರೋ ಅದಕ್ಕೆ ನೂರರಷ್ಟು ನ್ಯಾಯವನ್ನು ಕೊಡುವುದಾಗಿ ಭರವಸೆ ನೀಡಿದ್ದಾರೆ.