ಕೆ.ಆರ್.ಪೇಟೆಯಲ್ಲಿ ಬಿಜೆಪಿ ನಾಯಕರಿಂದ ಭರ್ಜರಿ ಪ್ರಚಾರ... ತುಪ್ಪದ ಹುಡುಗಿ ಸೆಲ್ಫಿಗೆ ಮುಗಿಬಿದ್ದ ಜನ! - k r pete shri ramulu campaign news
ಬಿಜೆಪಿಯ ಅಬ್ಬರದ ಮುಂದೆ ಜೆಡಿಎಸ್, ಕಾಂಗ್ರೆಸ್ ಮಂಕಾಗಿವೆ ಅನ್ನೋ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬಂದಿವೆ. ಕಾಂಗ್ರೆಸ್ ಪರವಾಗಿ ಒಂದೆರಡು ದಿನ ಮಾತ್ರ ಸ್ಟಾರ್ ಪ್ರಚಾರಕರು ಕಾಣಿಸಿಕೊಂಡರೆ, ಜೆಡಿಎಸ್ ಪರವಾಗಿ ಎರಡು ದಿನ ಮಾತ್ರ ಹೆಚ್ಡಿಕೆ ಮತ್ತು ಹೆಚ್.ಡಿ.ದೇವೇಗೌಡರು ಕಾಣಿಸಿಕೊಂಡರು. ಆದರೆ ಬಿಜೆಪಿ ಪರ ಪ್ರತಿನಿತ್ಯ ಒಬ್ಬರಲ್ಲಾ ಒಬ್ಬರು ಸ್ಟಾರ್ ಪ್ರಚಾರಕರು ಕೆ.ಆರ್.ಪೇಟೆಯಲ್ಲಿ ಕಾಣಿಸಿಕೊಳ್ತಾ ಇದ್ದು, ಪ್ರಚಾರ ಭರ್ಜರಿಯಾಗಿದೆ.