ವೈದ್ಯರನ್ನ ಕಾಪಾಡಿ ಪ್ಲೀಸ್; ಕರವೇ ಹಲ್ಲೆ ಖಂಡಿಸಿ ಡಾಕ್ಟರ್ಗಳ ಪ್ರತಿಭಟನೆ.. - Junior Doctors Protest at Bangalore
ಬೆಂಗಳೂರು: ವೈದ್ಯರನ್ನ ಕಾಪಾಡಿ ಪ್ಲೀಸ್ ಅಂತಾ ಮಿಂಟೋ ಕಿರಿಯ ವೈದ್ಯರು ಇಂದು ಪ್ರತಿಭಟನೆ ನಡೆಸಿದರು. ನಿನ್ನೆ ಯಾವುದೇ ಸೂಚನೆ ಇಲ್ಲದೇ ಆಸ್ಪತ್ರೆ ಒಳ ಪ್ರವೇಶಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಿರಿಯ ವೈದ್ಯರ ಮೇಲೆ ಹಲ್ಲೇ ನಡೆಸಿದ್ದರು. ಹೀಗಾಗಿ ನಮಗೆ ಯಾವುದೇ ರಕ್ಷಣೆಯಿಲ್ಲ ಎಂದು ಅಲ್ಲಿನ ಡಾಕ್ಟರ್ಗಳು ಬೇಸರ ವ್ಯಕ್ತಪಡಿಸಿದರು. ಕಿರಿಯ ವೈದ್ಯರಿಂದ ಮಾತ್ರ ಪ್ರತಿಭಟನೆ ನಡೆಯುತ್ತಿದ್ದು, ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ. ಮಿಂಟೋ ದಲ್ಲಿ ಕಿರಿಯ ವೈದ್ಯರೇ ಸುಮಾರು 70 ಮಂದಿ ಇದ್ದು, ವಿಕ್ಟೋರಿಯಾ, ವಾಣಿ ವಿಲಾಸ್ ಸೇರಿ ಒಟ್ಟು 500 ಕಿರಿಯ ವೈದ್ಯರಿದ್ದಾರೆ. ರಕ್ಷಣೆ ಸಿಗುವ ತನಕ ಕರ್ತವ್ಯಕ್ಕೆ ಹಾಜರಾಗದಿರಲು ಕಿರಿಯ ವೈದ್ಯರು ತೀರ್ಮಾನ ಸಹ ಕೈಗೊಂಡಿದ್ದಾರೆ.