ಪೊಲೀಸರ ಪಾಲಿಗೆ ಅನ್ನಪೂರ್ಣೆಯಾದ ನ್ಯಾಯಾಧೀಶೆ... ಕರ್ತವ್ಯನಿರತ ಆರಕ್ಷಕರಿಗೆ ಹೋಳಿಗೆ ಊಟ - judge roopa distrubuted food to police
ಕೊರೊನಾ ಸೋಂಕು ಹರಡದಂತೆ ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಿದ್ದ ಚಿಕ್ಕಬಳ್ಳಾಪುರ ಪೊಲೀಸರಿಗೆ ಸಿಜೆಎಂ ಹಿರಿಯ ನ್ಯಾಯಾಧೀಶೆ ಹೋಳಿಗೆ ಊಟವನ್ನು ಕೊಟ್ಟು ಹುರುಪಿನಿಂದ ಕೆಲಸವನ್ನು ನಿಭಾಯಿಸುವಂತೆ ಪ್ರೇರೆಪಿಸಿದರು. ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 9 ಕೇರಿದ್ದು ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.ಇದರ ಜೊತೆಗೆ ಸಾರ್ವಜನಿಕರನ್ನು ಹತೋಟಿಗೆ ತರಲು ಪೊಲೀಸ್ ಇಲಾಖೆ ಹಗಲುರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದು, ಚಿಕ್ಕಬಳ್ಳಾಪುರ ಜಿಲ್ಲಾ ಸಿಜೆಎಂ ನ್ಯಾಯಧೀಶೆ ರೂಪ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಹೋಳಿಗೆ ಊಟವನ್ನು ಕೊಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ನ್ಯಾಯಾಧೀಶರ ನಡೆಗೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.