ಕರ್ನಾಟಕ

karnataka

ETV Bharat / videos

'ಜೋ ಜೋ ಲಾಲಿ ನಾ ಹಾಡುವೆ' ಹಾಡನ್ನಾಡಿದ ನಟ ರವಿಶಂಕರ್‌ಗೌಡ.. - ಚಿನ್ನ ನಿನ್ನ ಮುದ್ದಾಡುವೆ ಚಿತ್ರ

By

Published : Mar 28, 2020, 4:04 PM IST

ವಿಶ್ವಾದ್ಯಂತ ಕೊರೊನಾ ವೈರಸ್‌ನಿಂದ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇವೆ. ಕರ್ನಾಟಕದಲ್ಲಿ ಮೂರು ಬಲಿ ತೆಗೆದುಕೊಂಡಿರುವ ಈ ಕೊರೊನಾ ವೈರಸ್ ಬಗ್ಗೆ ಜನಜಾಗೃತಿಗಾಗಿ ನಟ ರವಿಶಂಕರ್ ಗೌಡ ಎವರ್ ಗ್ರೀನ್ ಹಾಡೊಂದನ್ನ ಹಾಡಿದ್ದಾರೆ. ಡಾ. ವಿಷ್ಣುವರ್ಧನ್ ಅಭಿನಯದ ಚಿನ್ನ ನಿನ್ನ ಮುದ್ದಾಡುವೆ ಚಿತ್ರದ 'ಜೋ ಜೋ ಲಾಲಿ ನಾ ಹಾಡುವೆ' ಎಂಬ ಹಾಡನ್ನ ಚಿಟ್ಟೆ ಸ್ವಾಮಿ ಖ್ಯಾತಿಯ ರವಿ ಶಂಕರ್ ಗೌಡ ಹಾಡಿದ್ದಾರೆ. ಈ ಹಾಡು ನಮ್ಮ ಕರ್ನಾಟಕದ ಜನತೆ, ಭಯ ಮತ್ತು ನೋವನ್ನ ಮರೆತು ಮಲಗಲಿ ಎಂಬ ಉದ್ದೇಶದಿಂದ ರವಿಶಂಕರ್ ಗೌಡ ಹಾಡಿದ್ದಾರೆ. ಕನ್ನಡದ ಸಾಹಿತಿ ಆರ್.ಎನ್ ಜಯಗೋಪಾಲ್ ಬರೆದಿರುವ ಹಾಡನ್ನು ಯೇಸುದಾಸ್ ಅಂದು ಹಾಡಿದ್ರು. ಸದ್ಯಈ ಹಾಡನ್ನು ರವಿಶಂಕರ್ ಗೌಡ ನಾಡಿನ ಜನತೆಗೆ ಹಾಡುವ ಮೂಲಕ ಮನೆಯಲ್ಲೇ ಇರಿ ಎಂಬ ಸಂದೇಶ ಕೊಟ್ಟಿದ್ದಾರೆ.

ABOUT THE AUTHOR

...view details