ಬಿಜೆಪಿ ಬಿಟ್ಟು ಜೆಡಿಎಸ್ ಟಾರ್ಗೆಟ್ ಮಾಡಿದ ಕಾಂಗ್ರೆಸ್ ಕಲಿಗಳು... ಹೀಗಿತ್ತು ನಾಯಕರ ವಾಗ್ದಾಳಿ - mandya by election
ಮಂಡ್ಯ: ಸಕ್ಕರೆ ಜಿಲ್ಲೆಗೆ ಜೆಡಿಎಸ್ ಭದ್ರಕೋಟೆ ಎಂಬ ಹಣೆಪಟ್ಟಿ ಇದೆ. ಭದ್ರಕೋಟೆಯನ್ನು ಬಿಜೆಪಿ ಛಿದ್ರ ಮಾಡಲು ಪ್ಲಾನ್ ಮಾಡಿದ್ದರೆ, ಕಾಂಗ್ರೆಸ್ ತನ್ನ ಅಸ್ಥಿತ್ವಕ್ಕಾಗಿ ಹೋರಾಟ ಶುರು ಮಾಡಿದೆ. ಬಿಜೆಪಿಗರ ಟೀಕೆಗಿಂತ ಜೆಡಿಎಸ್ ನಾಯಕರೇ ಕಾಂಗ್ರೆಸ್ ನಾಯಕರಿಗೆ ಟಾರ್ಗೆಟ್ ಆಗಿದ್ದಾರೆ. ಇಂದು ಅಬ್ಬರದ ಪ್ರಚಾರ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಾ ಪ್ರಹಾರ ಮಾಡಿದರು. ಭಾಷಣದಲ್ಲಿ ಬಿಜೆಪಿ ವಿರುದ್ಧ ಚಾಟಿ ಬೀಸಿದರೂ, ಜಿಲ್ಲೆಯಲ್ಲಿ ಜೆಡಿಎಸ್ ವಿರುದ್ಧದ ಸಿದ್ದರಾಮಯ್ಯ ಅವರ ವಾಗ್ದಾಳಿ ಕಠಿಣವಾಗಿತ್ತು. ನನಗೆ ಒಕ್ಕಲಿಗ ವಿರೋಧಿ ಎಂದು ಹಣೆಪಟ್ಟಿ ಕಟ್ಟಿದರು ಎಂದು ತಮ್ಮ ನೋವನ್ನು ತೋಡಿಕೊಂಡರು.