ಜೆಡಿಎಸ್ ಕೊನೆಗಾಲದಲ್ಲಿ ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ: ಪ್ರೊ.ಮಹೇಶ್ ಚಂದ್ರಗುರು - Mysore
ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಮಸೂದೆಗೆ ಜೆಡಿಎಸ್ ಬೆಂಬಲ ನೀಡುವ ಮೂಲಕ, ಈ ಪಕ್ಷ ಕೊನೆಗಾಲದಲ್ಲಿ ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಟೀಕಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜಾತ್ಯಾತೀತ ಜನತಾದಳ ಅಲ್ಲ. ಜಾತೀವಾದಿ ಜನತಾದಳವಾಗಿ ಮಾರ್ಪಟ್ಟಿದೆ. ಪ್ರಜ್ವಲ್ ರೇವಣ್ಣಗೆ ಕೇಂದ್ರ ಸಚಿವ ಸ್ಥಾನ ಕೊಡ್ತೀವಿ, ಬಿಎಸ್‌ವೈ ಕೆಳಗಿಳಿದಾಗ ಸಪೋರ್ಟ್ ಮಾಡಬೇಡಿ ಎಂದು ಬಿಜೆಪಿ ಹೈಕಮಾಂಡ್ ಹೇಳಿರಬೇಕು. ಹಾಗಾಗಿ ಆಮಿಷಕ್ಕೆ ಒಳಗಾಗಿ ಈ ರೀತಿ ಬೆಂಬಲ ಕೊಟ್ಟಿರಬಹುದು ಎಂದು ಅವರು ಕುಟುಕಿದರು. ದೇವೇಗೌಡರು ಒಬ್ಬ ಮಹಾನ್ ಜಾತೀವಾದಿ. ಅದರಲ್ಲಿಯೂ ಶ್ರೀಮಂತ ಜಾತಿವಾದಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.