ಕಡೂರು: ಭಾರೀ ಮಳೆಗೆ ತುಂಬಿದ ಗುಂಡಿ... ಜೆಸಿಬಿ ಚಾಲಕ ಕೂದಲೆಳೆ ಅಂತರದಲ್ಲಿ ಪಾರು! - ನೀರಿನ ಪ್ರಮಾಣ ಹೆಚ್ಚಾಗಿ
ಕಡೂರು ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕೂದಲೆಳೆ ಅಂತರದಲ್ಲಿ ಒಂದು ದೊಡ್ಡ ಅವಘಡ ತಪ್ಪಿದೆ. ಗುಂಡಿಯಲ್ಲಿ ಮಣ್ಣು ತೆಗೆಯುವ ಕೆಲಸ ಮಾಡುವಾಗ ಜೆಸಿಬಿ ಸಮೇತ ವ್ಯಕ್ತಿ ಸಿಕ್ಕಿಹಾಕಿಕೊಂಡಿದ್ದು, ಹೊರ ಬರಲಾರದೇ ಜೆಸಿಬಿ ಚಾಲಕ ಪರದಾಟ ನಡೆಸಿದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೋಗೆಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಜೆಸಿಬಿಯಲ್ಲಿ ಕೆಲಸ ಮಾಡುವಾಗ ಏಕಾಏಕಿ ಗುಂಡಿಗೆ ನೀರು ನುಗ್ಗಿದೆ. ನೀರಿನ ಪ್ರಮಾಣ ಹೆಚ್ಚಾಗಿ ಬಂದ ಹಿನ್ನೆಲೆ ಜೆಸಿಬಿ ಕೆಲಸದ ಕಾರ್ಯ ಅಲ್ಲಿಯೇ ನಿಲ್ಲಿಸಿ ಕೆರೆ ಏರಿ ಮೇಲೆ ಚಾಲಕ ಏರಿದ್ದಾನೆ. ಸ್ವಲ್ಪ ತಡವಾಗಿದ್ದರೂ ನೀರಲ್ಲಿ ಜೆಸಿಬಿ ಚಾಲಕನ ಪ್ರಾಣಕ್ಕೇ ಕುತ್ತು ಬರುವ ಸಾಧ್ಯತೆ ಇತ್ತು ಎನ್ನಲಾಗಿದೆ.