ಬೀದಿ ಬದಿ ವ್ಯಾಪಾರ, ಸಂತೆ ಬಂದ್: ಜನಜೀವನ ಸ್ಥಬ್ಧ - president of the street side trade association Rangaswamy
ಬೆಂಗಳೂರು: ಕೊರೊನಾ ವೈರಸ್ ಹರಡುತ್ತಿರುವ ಹಿನ್ನಲೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯಾದ್ಯಂತ ಬೀದಿ ಬದಿ ವ್ಯಾಪಾರಿಗಳು ಹಾಗೂ ಸಂತೆ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಬಂದ್ ಪಾಲಿಸಲಿದ್ದಾರೆ. ಜನತಾ ಕರ್ಫ್ಯೂ ವೇಳೆ ತಿಂಡಿ ಪದಾರ್ಥಗಳು, ತರಕಾರಿ, ಹಣ್ಣು, ಹೂವು, ಬಟ್ಟೆ ಇತರ ಪದಾರ್ಥಗಳು ಸಂಪೂರ್ಣ ಬಂದ್ ಆಗಲಿದ್ದು, ಇದಕ್ಕೆ ಬೀದಿ ಬದಿ ವ್ಯಾಪಾರಿಗಳು ಹಾಗೂ ಗ್ರಾಹಕರು ಎಲ್ಲಾ ವರ್ತಕರು ಸಾಥ್ ನೀಡಿದೆ ಅಂತ ರಾಜ್ಯ ಬೀದಿ ಬದಿ ವ್ಯಾಪಾರ ಸಂಘದ ರಾಜ್ಯಾಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.