ಜನತಾ ಕರ್ಫ್ಯೂ: ಮಂಗಳೂರು ಸಂಪೂರ್ಣ ಸ್ತಬ್ಧ - ಜನತಾ ಕರ್ಫ್ಯೂ
ಮಂಗಳೂರು: ಪ್ರಧಾನಮಂತ್ರಿಯವರ ಕರೆಯಂತೆ ಜನತಾ ಕರ್ಪ್ಯೂಗೆ ಮಂಗಳೂರಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮುಂಜಾನೆಯಿಂದ ಸಂಜೆಯವರೆಗೆ ಮಂಗಳೂರು ಸಂಪೂರ್ಣ ಸ್ಥಬ್ಧವಾಗಿದ್ದು, ಜನರು ಜನತಾ ಕರ್ಪ್ಯೂಗೆ ಬೆಂಬಲ ಸೂಚಿಸಿದ್ದಾರೆ. ಸಂಜೆಯ ವೇಳೆಗೆ ಜನರು ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ಸೋಂಕಿತರ ಹಾರೈಕೆ ಮಾಡುತ್ತಿರುವ ವೈದ್ಯರಿಗೆ, ದಾದಿಯರಿಗೆ ಕೃತಜ್ಞತೆ ಸಲ್ಲಿಸಿದರು.