ಕರ್ನಾಟಕ

karnataka

ETV Bharat / videos

ಕೊರೊನಾ ವಿರುದ್ಧ ಒಗ್ಗೂಡಿದ ನಾಡಿನ ಜನ... ಥರ್ಮಲ್ ಸ್ಕ್ರೀನಿಂಗ್ ಮಾಡಿದ ಸೆಕ್ಯೂರಿಟಿ​ ಗಾರ್ಡ್ - ಕರ್ನಾಟಕದಲ್ಲಿ ಕೊರೊನಾ ವೈರಸ್

By

Published : Mar 23, 2020, 6:14 AM IST

ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಜನತಾ ಕರ್ಫ್ಯೂಗೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಜನತಾ ಕರ್ಫ್ಯೂ ವೇಳೆ ನಾಗರಿಕರು ತಮ್ಮದೆ ಆದ ಶೈಲಿಯಲ್ಲಿ ವಿನೂತನವಾಗಿ ಜನ ಜಾಗೃತಿ ಮೂಡಿಸಿದರು. ಮೈಸೂರಿನಲ್ಲಿ ಕರ್ತವ್ಯ ನಿರತ ಪೊಲೀಸರಿಗೆ ಇಲ್ಲಿನ ದಂಪತಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದರು. ಬೆಳಗಾವಿಯ ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆ ಮುಂದೆ ನಿಂತು ಕೊರೊನಾ ಬಗ್ಗೆ ಜನ ಜಾಗೃತಿ ಮೂಡಿಸಿದರು. ಧಾರವಾಡ ಜಿಲ್ಲೆಯಲ್ಲಿ ಜನರಿಗೆ ಥರ್ಮಲ್ ಸ್ಕ್ರೀನಿಂಗ್ ವಾಹನಗಳಿಗೆ ಸೋಂಕು ನಿವಾರಣಾ ದ್ರವ ಸಿಂಪಡಿಸಲಾಯಿತು. ಬೆಳಗಾವಿಯಲ್ಲಿ ಬೀಮ್ಸ್ ಆಸ್ಪತ್ರೆಯ ಸೆಕ್ಯೂರಿಟಿಯೊಬ್ಬರು ಥರ್ಮಲ್ ಸ್ಕ್ರೀನಿಂಗ್ ನಡೆಸಿದರು. ಶಿವಮೊಗ್ಗ ಕೆಎಸ್​ಆರ್​ಟಿಸಿ ಸಿಬ್ಬಂದಿಗಳಿಗೆ ಸಹೋದ್ಯೋಗಿಗಳು ಊಟ ಮತ್ತು ತಿಂಡಿ ವ್ಯವಸ್ಥೆ ಮಾಡಿದರು.

ABOUT THE AUTHOR

...view details