ದೇಶಕ್ಕೆ ಕೊರೊನಾ ದಾಂಗುಡು... ಜನತಾ ಕರ್ಫ್ಯೂಗೆ ಗ್ರಾಮೀಣ, ನಗರ ಭಾರತ ಸ್ತಬ್ಧ..!
ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಜನತಾ ಕರ್ಫ್ಯೂಗೆ ಹಾವೇರಿ, ಬೆಂಗಳೂರು ಗ್ರಾಮೀಣ, ಬೆಳಗಾವಿಯ ಚಿಕ್ಕೋಡಿ, ತುಮಕೂರು ಹಾಗೂ ಬಳ್ಳಾರಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಪೆಟ್ರೋಲ್ ಬಂಕ್, ಹೋಟೆಲ್, ಬೀದಿ ಬದಿ ವ್ಯಾಪಾರ, ಆಟೋ- ಬಸ್ ಸಂಚಾರ ಎಲ್ಲಾ ಹೋಟೆಲ್, ಬಾರ್ಗಳು ಬಂದ್ ಆಗಿದ್ದವು. ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರಿಲ್ಲದೆ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ತುರ್ತು ಅವಶ್ಯಕತೆಗಳಾದ ಮೆಡಿಕಲ್ ಶಾಪ್, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸಂಜೆ 5 ಗಂಟೆಯ ವೇಳೆಗೆ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವರಿಗೆ ನಾಗರಿಕರು ಗಂಟೆ, ಜಾಗಟೆ, ಕೊಳಲು, ಚಪ್ಪಾಳೆ ಬಾರಿಸಿ ಗೌರವ ಸಲ್ಲಿಸಿದರು.