ಆರೋಗ್ಯ ಸೈನಿಕರಿಗೆ ಕಲಬುರಗಿ ನಾಗರಿಕರ ಚಪ್ಪಾಳೆಯ ಕೃತಜ್ಞತೆಗಳು
ಪ್ರಾಣದ ಹಂಗು ತೊರೆದು ಮಹಾಮಾರಿ ಕೊರೊನಾ ಪೀಡಿತರನ್ನು ರಕ್ಷಿಸುತ್ತಿರುವ ವೈದ್ಯರು ಮತ್ತು ಅವರ ಬೆನ್ನಿಗೆ ನಿಂತಿರುವ ಸಿಬ್ಬಂದಿಗಳು, ಪೊಲೀಸರು ಹಾಗೂ ಅಧಿಕಾರಿ ವರ್ಗಕ್ಕೆ ಕಲಬುರಗಿ ಜನರು ಚಪ್ಪಾಳೆ ಮತ್ತು ತಮಟೆ ಬಾರಿಸುವ ಮೂಲಕ ಗೌರವ ಸಲ್ಲಿಸಿದರು. ಪ್ರಧಾನ ಮಂತ್ರಿಯವರ ಜನತಾ ಕರ್ಫ್ಯೂನ ಭಾಗವಾಗಿ ಸಂಜೆ 5 ಗಂಟೆಗೆ ನಗರದ ನಿವಾಸಿಗಳು ತಮ್ಮ ಮನೆ ಬಾಲ್ಕನಿ ಮತ್ತು ಮಾಳಿಗೆ ಹಾಗೂ ರಸ್ತೆಗಿಳಿದು ಅಭಿನಂದನೆ ಸಲ್ಲಿಸಿದರು.