ಕಿಲ್ಲರ್ ವೈರಸ್ ನಿರ್ಮೂಲನೆಗೆ ಕೈ ಜೋಡಿಸಿದ ಸುರಪುರ - ಕೊರೊನಾ ವಿರುದ್ಧ ಹೋರಾಟ
ಸುರಪುರ: ಪ್ರಧಾನಿ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂಗೆ ಸುರಪುರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಸದಾಕಾಲ ಜನ ಜಂಗುಳಿಯಿಂದ ತುಂಬಿರುತ್ತಿದ್ದ ನಗರದ ದರ್ಬಾರ್ ರಸ್ತೆ, ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತ, ಮಾರುಕಟ್ಟೆ ಸಂಪೂರ್ಣ ಖಾಲಿ ಹೊಡೆಯುತ್ತಿವೆ. ಇದು ಹೀಗೆ ಮುಂದುವರಿದರೆ ಆದಷ್ಟು ಬೇಗ ಕಿಲ್ಲರ್ ಕೊರೊನಾ ವೈರಸ್ ಅನ್ನು ನಿರ್ಮೂಲನೆ ಮಾಡಬಹುದು.