ಕರ್ನಾಟಕ

karnataka

ETV Bharat / videos

ಜನಸೇವಕ ಕಾರ್ಯಕ್ರಮ: ಕಾಂಗ್ರೆಸ್​, ಜೆಡಿಎಸ್ ವಿರುದ್ಧ ಬಿಜೆಪಿ ವಾಕ್ ಪ್ರಹಾರ - ಹಾಸನದಲ್ಲಿ ಜನಸೇವಕ ಕಾರ್ಯಕ್ರಮ

By

Published : Jan 13, 2021, 7:39 AM IST

ಹಾಸನದಲ್ಲಿ ಜನಸೇವಕ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಬಿಜೆಪಿ ನಾಯಕರು ಕಾಂಗ್ರೆಸ್​ ಮತ್ತು ಜೆಡಿಎಸ್​​ ಪಕ್ಷಗಳು ಹಾಗೂ ನಾಯಕರ ಮೇಲೆ ಮಾತಿನ ಪ್ರಹಾರ ನಡೆಸಿದರು. ದೇಶದಲ್ಲಿಯೇ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿರುವಾಗ ಅದರ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ. ನಮ್ಮ ಜಿಲ್ಲೆಯಲ್ಲಿರುವುದು ಜೆಡಿಎಸ್ ಮತ್ತು ಬಿಜೆಪಿ ನಡುವೆ ಸಮರ. ಹಾಗಾಗಿ ಅಪ್ಪ - ಮಕ್ಕಳ ಪಕ್ಷವಾಗಿರುವ ಜೆಡಿಎಸ್ ಅನ್ನು ಮುಂದಿನ ದಿನಗಳಲ್ಲಿ ರಾಜ್ಯದಿಂದ ಕಿತ್ತೆಸೆಯಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಶಾಸಕ ಪ್ರೀತಂ ಗೌಡ ಕರೆಕೊಟ್ಟರು. ಇನ್ನೂ ಸಂಸದ ಪ್ರತಾಪ್​ ಸಿಂಹ ಕೂಡಾ ಜೆಡಿಎಸ್​ ವಿರುದ್ಧ ವಾಗ್ದಾಳಿ ನಡೆಸಿದರು. ಈ ಸಮಯದಲ್ಲಿ ಗ್ರಾಪಂ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತರನ್ನ ಸನ್ಮಾನಿಸಲಾಯಿತು.

ABOUT THE AUTHOR

...view details