ಕರ್ನಾಟಕ

karnataka

ETV Bharat / videos

ಜಾನಪದ ಜಾತ್ರೆಯಲ್ಲಿ ಮೇಳೈಸಿದ ಗ್ರಾಮೀಣ ಸೊಗಡು - Janapada fair in Gangavati,

🎬 Watch Now: Feature Video

By

Published : Jan 14, 2020, 12:01 AM IST

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಸ್ವಾಮಿ ವಿವೇಕಾನಂದ ಪಬ್ಲಿಕ್ ಶಾಲೆಯಿಂದ ಆಯೋಜಿಸಿದ್ದ ಜಾನಪದ ಜಾತ್ರೆ ಎಂಬ ಕಾರ್ಯಕ್ರಮದಲ್ಲಿ ಗ್ರಾಮೀಣ ಸೊಗಡು, ಗ್ರಾಮ ಮರುಸೃಷ್ಟಿ ಹಾಗೂ ನಾನಾ ಕಲಾ ಪ್ರಕಾರಗಳು ಮೈಳೈವಿಸಿದ್ದವು. ಉದ್ಘಾಟನೆಗೆ ಆಗಮಿಸಿದ್ದ ಹಿರಿಯ ಸಾಹಿತಿ ಶಂಭು ಬಳಿಗಾರ ಅವರನ್ನು ಚಕ್ಕಡಿ ಬಂಡಿಯಲ್ಲಿ ಮೆರವಣಿಗೆ ಮಾಡಲಾಯಿತು. ಯಕ್ಷಗಾನ, ಲಮಾಣಿ ನೃತ್ಯ, ಹುಲಿವೇಷ, ಡೊಳ್ಳು, ಕಳಶ ಮೆರವಣಿಗೆಯಂತ ಹತ್ತಾರು ಕಲಾ ಪ್ರಕಾರಗಳನ್ನು ಸ್ವತಃ ಮಕ್ಕಳೇ ಮೆರವಣಿಗೆಯಲ್ಲಿ ನಿರ್ವಹಿಸಿ ಗಮನ ಸೆಳೆದರು. ಇನ್ನು ಶಾಲಾ ಆವರಣದಲ್ಲಿ ಮರುಸೃಷ್ಟಿಯಾಗಿದ್ದ ಹಳ್ಳಿಯಲ್ಲಿನ ಗ್ರಾಮೀಣ ದೈನಿಕ ಚಟುವಟಿಕೆಗಳ ರೂಪಕಗಳನ್ನು ಪ್ರದರ್ಶಿಸಿದ್ದು ಸಾರ್ವಜನಿಕರನ್ನು ವಿಶೇಷವಾಗಿ ಗಮನ ಸೆಳೆಯಿತು. ಗ್ರಾಮೀಣ ಕ್ರೀಡೆ, ಕಲೆಗಳ ಮರುಸೃಷ್ಟಿಯನ್ನು ಮಕ್ಕಳಿಂದಲೇ ಮಾಡಿಸಲಾಗಿತ್ತು.

ABOUT THE AUTHOR

...view details