ಕರ್ನಾಟಕ

karnataka

ETV Bharat / videos

ನವರಸ ನಾಯಕನ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ ಜಗ್ಗೇಶ್-ಪರಿಮಳ ನಿಲಯ - Home to blind singers

By

Published : Mar 13, 2020, 8:28 AM IST

Updated : Mar 13, 2020, 9:56 AM IST

ತುಮಕೂರು: ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ದೇಗುಲಗಳ ಬಳಿ ಸುಮಧುರ ಕಂಠಸಿರಿಯಿಂದ ಹಾಡುಗಳನ್ನು ಹಾಡುತ್ತಾ ಭಿಕ್ಷೆ ಬೇಡಿ ಬದುಕು ನಡೆಸುತ್ತಿದ್ದ ಅಂಧ ಗಾನ ಕೋಗಿಲೆಗಳಿಗೆ ಸುಂದರ ಸೂರಿನ ಭಾಗ್ಯ ಲಭಿಸಿದೆ. ಕನ್ನಡದ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ರಾಜ್ಯದ ಮನೆ ಮಾತಾಗಿರೋ ಅಂಧ ಗಾಯಕಿಯರ ಕುಟುಂಬಕ್ಕೆ ನೂರಾರು ಮಂದಿ ನೆರವಿನ ಹಸ್ತ ಚಾಚಿದ್ದಾರೆ. ಇದಲ್ಲದೇ ನಟ ಜಗ್ಗೇಶ್ ಹಾಗೂ ಅವರ ಅಭಿಮಾನಿಗಳ ತಂಡ ಮತ್ತು ಕೊರಟಗೆರೆ ಫ್ರೆಂಡ್ಸ್ ಗ್ರೂಪ್​​​ನಿಂದ ಚಂದದ ಮನೆ ನಿರ್ಮಿಸಿಕೊಡಲಾಗಿದೆ. ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯ ಅಂಧ ಗಾಯಕಿಯರಾದ ಮಂಜಮ್ಮ ಮತ್ತು ರತ್ನಮ್ಮ ಸಹೋದರಿಯರ ಕುಟುಂಬಕ್ಕೆ ಜಗ್ಗೇಶ್ ನೀಡಿದ್ದ ಭರವಸೆಯಂತೆ ಮನೆ ದುರಸ್ತಿ ಮಾಡಿಕೊಡಲಾಗಿದೆ.
Last Updated : Mar 13, 2020, 9:56 AM IST

ABOUT THE AUTHOR

...view details