ದಿವ್ಯಾಂಗ ಗಾಯಕಿಯರ ನೆರವಿಗೆ ಬಂದ ನವರಸನಾಯಕ: ಮನೆ ದುರಸ್ಥಿ ಕಾರ್ಯ ಆರಂಭ - Jaggesh helps to Blind People
ಗುರುಗಳಿಲ್ಲದೆ ಕಡು ಬಡತನದಲ್ಲಿಯೇ ಸಂಗೀತಾಭ್ಯಾಸ ಮಾಡಿ ಸುಶ್ರಾವ್ಯವಾಗಿ ಹಾಡುಗಳನ್ನು ಹಾಡುತ್ತಾ ಭಿಕ್ಷೆ ಬೇಡಿ ಬದುಕು ಸಾಗಿಸ್ತಿದ್ದ ದಿವ್ಯಾಂಗ ಪ್ರತಿಭೆಗಳಿವು. ಇವರ ಸಂಗೀತ ಕೌಶಲ್ಯ ಗಮನಿಸಿ ಖಾಸಗಿ ವಾಹಿನಿಯೊಂದು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ. ಇನ್ನೊಂದೆಡೆ ಇವರ ಮನೆಯ ದುಸ್ಥಿತಿ ಅರಿತ ನಟ ಜಗ್ಗೇಶ್ ಮನೆ ದುರಸ್ಥಿ ಕಾರ್ಯಕ್ಕೆ ಕೈಹಾಕಿದ್ದು ಮಾನವೀಯತೆ ಮೆರೆದಿದ್ದಾರೆ. ಈ ಕುರಿತು ಇಲ್ಲಿದೆ ಒಂದು ಮಾನವೀಯ ಕಳಕಳಿಯ ಸ್ಟೋರಿ..