ವ್ಯಾಕ್ಸಿನ್ ಹಂಚಿಕೆಯಲ್ಲಿ ರಚನಾತ್ಮಕ ಬೆಂಬಲ ನೀಡಬೇಕು: ಜಗದೀಶ್ ಶೆಟ್ಟರ್ - ವ್ಯಾಕ್ಸಿನ್ ಹಂಚಿಕೆಗೆ ಸಕಲ ಸಿದ್ಧತೆ
ಮೈಸೂರು: ವ್ಯಾಕ್ಸಿನ್ ಹಂಚಿಕೆಯಲ್ಲಿ ರಚನಾತ್ಮಕ ಬೆಂಬಲ ನೀಡಬೇಕು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ವ್ಯಾಕ್ಸಿನ್ ಹಂಚಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿಪಕ್ಷ ಎಂದರೆ ಕೇವಲ ಟೀಕೆ ಮಾಡುವುದಲ್ಲ, ಒಳ್ಳೆಯ ಕೆಲಸಕ್ಕೆ ಸಹಕಾರ ನೀಡಬೇಕು, ವಿನಾ ಕಾರಣ ಆಪಾದನೆ ಮಾಡಬಾರದು ಎಂದು ಅವರು ಹೇಳಿದ್ದಾರೆ. ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕೈಗಾರಿಕಾ ಬೆಳವಣಿಗೆ ಆಗುತ್ತಿದೆ. ಹಲವಾರು ಪ್ರೊಪೋಸಲ್ಗಳು ಬಂದಿವೆ. ಹೊರಗಿನ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿವೆ ಎಂದು ಶೆಟ್ಟರ್ ತಿಳಿಸಿದ್ದಾರೆ.