ಬಿಬಿಎಂಪಿ ಚುನಾವಣೆ, ಆಮ್ ಆದ್ಮಿ ಪಕ್ಷದ ಮುಂದಿನ ಗುರಿ: ಆಪ್ ಮುಖಂಡ ಜಗದೀಶ್ - ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಕುರಿತು ಜಗದೀಶ್ ಪ್ರತಿಕ್ರಿಯೆ
ಬೆಂಗಳೂರು: ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಮಾಡಿದ ಸರ್ವಾಂಗೀಣ ಅಭಿವೃದ್ಧಿಗೆ ಫಲ ದೊರೆತಿದೆ. ಇದೇ ಮಾದರಿಯ ಅಭಿವೃದ್ಧಿ ಬೆಂಗಳೂರಲ್ಲೂ ಮಾಡಲು ಸಾಧ್ಯ. ನಾಳೆಯಿಂದಲೇ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದಲ್ಲಿ ಸಭೆಗಳನ್ನು ನಡೆಸಲಿದ್ದಾರೆ. ಆರು ತಿಂಗಳಲ್ಲಿ ಎದುರಾಗುವ ಬಿಬಿಎಂಪಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಲಿದೆ ಎಂದು ಪಕ್ಷದ ಮುಖಂಡ ಜಗದೀಶ್ ಈಟಿವಿ ಭಾರತ್‌ಗೆ ತಿಳಿಸಿದರು.