ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ ಸಖಾರಾಯ ಪಟ್ಟಣದ ಹಲಸಿನ ಹಣ್ಣು! - undefined
ಚಿಕ್ಕಮಗಳೂರು ಜಿಲ್ಲೆಯ ಸಖಾರಾಯ ಪಟ್ಟಣದಲ್ಲೀಗ ಹಲಸಿನ ಸುಗ್ಗಿ ಆರಂಭಗೊಂಡಿದ್ದು, ರಸ್ತೆಯ ಉದ್ದಗಲಕ್ಕೂ ಚಂದ್ರಬೊಕ್ಕೆ ಹಾಗೂ ರುದ್ರಾಕ್ಷಿ ಬೊಕ್ಕೆ ಹಲಸಿನ ಹಣ್ಣುಗಳು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. ಇಲ್ಲಿನ ಬೆಳೆಗಾರರು ವರ್ಷದಲ್ಲಿ ಮೂರು ತಿಂಗಳ ಕಾಲ ಹಲಸನ್ನು ಉಪ ಬೆಳೆಯಾಗಿ ಬೆಳೆಯುತ್ತಿದ್ದು, ಇವು ಸಕ್ಕರೆಯಷ್ಟು ಸಿಹಿಯಾಗಿದ್ದು ತಿನ್ನಲು ರುಚಿಯಾಗಿವೆ. ರಾಜ್ಯದೆಲ್ಲೆಡೆ ಬೇಡಿಕೆ ಇರುವ ಈ ಹಲಸಿನ ಹಣ್ಣಿನ ಮಾರಾಟಕ್ಕೆ ಸೂಕ್ತವಾದ ಮಾರುಕಟ್ಟೆ ಒದಗಿಸಿಕೊಟ್ಟರೆ ದೇಶಾದ್ಯಂತ ಸಖಾರಾಯಪಟ್ಟಣದ ಹಣ್ಣು ಪ್ರಖ್ಯಾತಿ ಪಡೆಯುತ್ತದೆ ಎಂಬುದು ಇಲ್ಲಿ ರೈತರ ಒತ್ತಾಸೆಯಾಗಿದೆ.