ಮಂಗಳೂರಿನ ಭಾರತ್ ಬೀಡಿ ವರ್ಕ್ಸ್ ಸೇರಿ ವಿವಿಧೆಡೆ ಐಟಿ ದಾಳಿ - ಮಂಗಳೂರಿನಲ್ಲಿ ಐಟಿ ದಾಳಿ
ರಾಜ್ಯದ ವಿವಿಧೆಡೆ ಇಂದು ಐಟಿ ರೇಡ್ ನಡೆದಿದೆ. ಮಂಗಳೂರಿನ ಭಾರತ್ ಬೀಡಿ ವರ್ಕ್ಸ್ ಮೇಲೆಯೂ ದಾಳಿ ನಡೆಸಲಾಗಿದೆ. ನಗರದ ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿರುವ ಸಂಸ್ಥೆಯ ಕಚೇರಿ ಮೇಲೆ ದಾಳಿಯಾಗಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ದಾಳಿ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ.