ಪರಂ ಮನೆ ಮೇಲೆ ಐಟಿ ದಾಳಿ, ಏನೆಲ್ಲಾ ಆಗ್ತಿದೆ: ಈಟಿವಿ ಭಾರತ ಗ್ರೌಂಡ್ ರಿಪೋರ್ಟ್
ಬೆಂಗಳೂರು: ಸದಾಶಿವನಗರದಲ್ಲಿರುವ ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರ ಮನೆ ಇಂದು ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸುತ್ತಿದ್ದು, ಸುಮಾರು ಹತ್ತು ಅಧಿಕಾರಿಗಳನೊಳಗೊಂಡ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಕೇವಲ ಬೆಂಗಳೂರಿನ ಮನೆ ಮಾತ್ರವಲ್ಲದೇ ತುಮಕೂರಿನಲ್ಲೂ ದಾಳಿ, ಶೋಧ ಕಾರ್ಯವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿಯನ್ನು ನಮ್ಮ ಪ್ರತಿನಿಧಿ ನೀಡಿದ್ದಾರೆ.