ಐಪಿಎಸ್ ಅಧಿಕಾರಿಯ ಭಾಷಾ ಪ್ರೇಮ: ಕನ್ನಡದ ಮೇಲಿನ ಅವರ ಕಾಳಜಿಗೆ ಸಲಾಂ - ಕನ್ನಡ ಹಾಡನ್ನು ಹಾಡಿದ ಇಶಾ ಪಂತ್
ಐಪಿಎಸ್ ಅಧಿಕಾರಿಯಾಗಿರುವ ಆಗ್ನೇಯ ವಿಭಾಗ ಡಿಸಿಪಿ ಇಶಾ ಪಂತ್ ಅವರು ಹಾಡಿದ ಹಾಡು ಈಗ ಎಲ್ಲೆಡೆ ಸಖತ್ ವೈರಲ್ ಆಗಿದೆ. ಅವರು ಹುಟ್ಟಿದ್ದು ಮಧ್ಯಪ್ರದೇಶವಾದರೂ ಕರ್ನಾಟಕಕ್ಕೆ ಬಂದ ಮೂರು ವರ್ಷಗಳಲ್ಲೇ ಕನ್ನಡ ಕಲಿತಿದ್ದಾರೆ. ಕನ್ನಡದ ಗೀತಾ ಸಿನಿಮಾ ಹಾಡನ್ನೇ ಹಾಡುವ ಮೂಲಕ ಕನ್ನಡಾಭಿಮಾನವನ್ನು ಮೆರೆದಿದ್ದಾರೆ. ಈ ಬಗ್ಗೆ ಅವರು ಈಟಿವಿ ಭಾರತ್ ಜೊತೆ ಮಾತನಾಡಿ, ಕನ್ನಡದ ಮೇಲಿನ ಪ್ರೇಮ ಮತ್ತು ಅಭಿಮಾನ ಕುರಿತಂತೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.