ಶಿವಮೊಗ್ಗದಲ್ಲಿ ಐಪಿಲ್ ಪ್ಯಾನ್ ಪಾರ್ಕ್... ಬಿಗ್ ಸ್ಕ್ರೀನ್ನಲ್ಲಿ ಪಂದ್ಯದ ನೇರ ಪ್ರಸಾರ - kannada news
ಶಿವಮೊಗ್ಗ: ಮಲೆನಾಡಿನಲ್ಲಿ ಮೊದಲ ಬಾರಿಗೆ ಐಪಿಎಲ್ ಪ್ಯಾನ್ ಪಾರ್ಕ್ ಮೂಲಕ ಐಪಿಎಲ್ ಪಂದ್ಯ ವಿಕ್ಷೇಣೆ. ಬೇಸಿಗೆ ಬಿರುಬಿಸಿಲಿನ ಸೆಕೆಯಲ್ಲಿ ಮನೆಯಲ್ಲಿ ಕುಳಿತು ಸೊಳ್ಳೆ ಕಡಿಸಿಕೊಂಡು ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವವರಿಗೆ ಶಿವಮೊಗ್ಗದಲ್ಲಿ ವಿನೂತನ ಅನುಭವ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ನಿರ್ಮಿಸಲಾಗಿರುವ ವಿವೋ ಐಪಿಎಲ್ ಪ್ಯಾನ್ ಪಾರ್ಕ್ನಲ್ಲಿ ಎರಡು ದಿನಗಳ ಕಾಲ ದೊಡ್ಡ ಪರದೆಯ ಮೇಲೆ ಐಪಿಎಲ್ ಮ್ಯಾಚ್ ನೋಡುವ ಅವಕಾಶ ಕಲ್ಪಿಸಿದ್ದಾರೆ. ತಮ್ಮ ನೆಚ್ಚಿನ ತಂಡಗಳ ಆಟ ವೈಖರಿಯನ್ನ ದೊಡ್ಡ ಪರದೆಯ ಮೇಲೆ ನೋಡಿ, ಕ್ರಿಕೆಟ್ ಪ್ರೇಮಿಗಳಂತೂ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶವಿದ್ದು, ಪಂದ್ಯ ವೀಕ್ಷಿಸುವವರಿಗೆ ಉಚಿತ ಲಕ್ಕಿ ಡಿಪ್ ಕೂಪನ್ ನೀಡಲಾಗುತ್ತಿದೆ. ಜೊತೆಗೆ ಮಕ್ಕಳಿಗಾಗಿ ವಿವಿಧ ಆಟಗಳನ್ನು ಆಡಿಸಲಾಗುತ್ತಿದ್ದು. ವಿಜೇತರಿಗೆ ಖ್ಯಾತ ಆಟಗಾರರ ಸಹಿಯುಳ್ಳ ಟೀ ಶರ್ಟ್ ಕೊಡುಗೆಯಾಗಿ ನೀಡಲಾಗುತ್ತಿದೆ.