ಪ್ಲಾನ್ ಆಫ್ ಆಕ್ಷ್ಯನ್ ಏನು? ಈಟಿವಿ ಭಾರತದ ಜೊತೆ ಶಿಕ್ಷಣ ಸಚಿವರ ಮಾತು - PUC Exam
ಬೆಂಗಳೂರು: ಕೊರೊನಾ ವೈರಸ್ ಮಕ್ಕಳ ಶಿಕ್ಷಣದ ಮೇಲೂ ಗಮನಾರ್ಹ ಬದಲಾವಣೆಯನ್ನು ಉಂಟುಮಾಡಿದ್ದು, ಸಂದಿಗ್ಧ ಪರಿಸ್ಥಿತಿಯಲ್ಲೂ ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಮುನಿಸು, ಮಕ್ಕಳ ಶಾಲಾ ಕನಸು, ಪೋಷಕರ ಆತಂಕ, ವಿದ್ಯಾಗಮ ಯೋಜನೆ, ದಾಖಲಾತಿ ಪ್ರಕ್ರಿಯೆ ಹೀಗೆ ಹತ್ತು ಹಲವು ವಿಷಯಗಳ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಈಟಿವಿ ಭಾರತ್ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ಶಾಲೆ ಆರಂಭಕ್ಕೆ ಪ್ಲಾನ್ ಆಫ್ ಆಕ್ಷ್ಯನ್ನಿಂದ ಹಿಡಿದು ಸದ್ಯ ಉದ್ಭವಿಸಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಸೇರಿದಂತೆ ಸವಿವರವಾಗಿ ಮಾಹಿತಿ ನೀಡಿದ್ದಾರೆ.