ಸ್ವಪಕ್ಷೀಯ ಶಾಸಕನ ವಿರುದ್ಧವೇ ತಿರುಗಿಬಿದ್ದ ಎಂಎಲ್ಸಿ, ಮಾಜಿ ಸಂಸದ... ಜೆಡಿಎಸ್ನಲ್ಲಿ ಬೇಗುದಿ! - ಸುರೇಶ್ ಗೌಡ ನಾಗಮಂಗಲ . ಶಾಸಕ
ಉಪ ಚುನಾವಣೆ ಹೊಸ್ತಿಲಲ್ಲಿ ಈ ಪಕ್ಷದಲ್ಲಿ ವೈಮನಸ್ಸು ಎದ್ದಿದೆ. ಕಾಮಗಾರಿ ವಿಚಾರವಾಗಿ ಶಾಸಕ, ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಂಸದರ ನಡುವೆ ಸಮರವೇ ಶುರುವಾಗಿದೆ. ಪಕ್ಷದ ಶಾಸಕನ ವಿರುದ್ಧವೇ ಕಳಪೆ ಕಾಮಗಾರಿಯ ಆರೋಪವನ್ನು ಎಂಎಲ್ಸಿ ಹಾಗೂ ಮಾಜಿ ಸಂಸದರು ಮಾಡಿದರೆ, ಅವರಿಗೆ ಶಾಸಕ ಸುರೇಶ್ ಗೌಡ ಪ್ರತ್ಯುತ್ತರ ನೀಡಿದ್ದಾರೆ.