ಸರ್ಕಾರದಿಂದಲೇ ಇನ್ಸ್ಪೈರ್ ಅವಾರ್ಡ್ ಮತ್ತು ವಿಜ್ಞಾನ ವಸ್ತು ಪ್ರದರ್ಶನ - ಜಿಲ್ಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ
ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಎರಡು ದಿನಗಳ ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರದರ್ಶನದಲ್ಲಿ ಕೃತಕವಾಗಿ ಮರಳನ್ನು ಹೇಗೆ ತಯಾರು ಮಾಡುವುದು? ಕುಡಿಯುವ ನೀರಿನ ಶುದ್ಧೀಕರಣ, ಜೀಜ ಬಿತ್ತನೆ ಮಾಡುವ ಯಂತ್ರ, ಏತ ನೀರಾವರಿಯಿಂದ ವಿದ್ಯುತ್ ತಯಾರಿಕೆ, ಸೈಕಲ್ ಹೆಲ್ಮೆಟ್, ಡಿಸಿ ಚಾರ್ಜರ್, ಹಸಿರುಮನೆ ಪರಿಣಾಮ, ಸೋಲಾರ್ ಸಿಸ್ಟಮ್ ನಿಂದ ಲಿಫ್ಟ್ ಚಾಲನೆ ಹೀಗೆ ವಿವಿಧ ವಿಜ್ಞಾನದ ಮಾದರಿಗಳನ್ನು ಈ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಕಾಣ ಬಹುದಾಗಿತ್ತು.