ಕೈಗಾರಿಕಾ ವಲಯ ವೇಷ್ಟ್.. ದುಡಿಯೋಕಂತಾ ಜಾಗ ಕೊಟ್ರೇ,, ಮತ್ತೇನ್‌ರೀ ಇವರ ಪ್ರಾಬ್ಲಂ! - ಕೈಗಾರಿಕಾ ವಲಯ
ಸರ್ಕಾರ ಉದ್ಯೋಗ ಸೃಷ್ಠಿಗಾಗಿ, ಆರ್ಥಿಕ ಪ್ರಗತಿಗಾಗಿ ನಗರಪ್ರದೇಶಗಳಲ್ಲಿ ಕೈಗಾರಿಕಾ ವಲಯಗಳನ್ನು ಸ್ಥಾಪನೆ ಮಾಡಿದೆ. ಅಲ್ಲದೆ ಇಂತಹ ವಲಯದಲ್ಲಿ ಆಸಕ್ತಿ ಹೊಂದಿದವರಿಗೆ ಕಡಿಮೆ ದರದಲ್ಲಿ ಜಾಗ ನೀಡಿ ಪ್ರೋತ್ಸಾಹಿಸುತ್ತಿದೆ. ಆದರೆ, ಹೀಗೆ ಪ್ರೋತ್ಸಾಹಿಸಿದ ಗಡಿಜಿಲ್ಲೆ ಕಾರವಾರದಲ್ಲಿ ಜಾಗ ಪಡೆದ ಅದೆಷ್ಟೋ ಮಾಲೀಕರುಗಳು ಜಾಗವನ್ನು ಪಾಳು ಬಿಟ್ಟಿದ್ದು, ಇದೀಗ ನಗರದಲ್ಲಿ ಕೈಗಾರಿಕೆಗಳು ಇದ್ದು ಇಲ್ಲದಂತಾಗಿ ನಿರುದ್ಯೋಗ ಸಮಸ್ಯೆ ತಾಂಡವಾಡುವಂತಾಗಿದೆ.