ಚಾಮರಾಜನಗರ ಹುಲಿ ಸಂರಕ್ಷಣಾ ಕಾಡಿನಲ್ಲಿ ಹುಲಿಗಳ ಸಂಖ್ಯೆ ವ್ಯಾಪಕ ಏರಿಕೆ: ಸಂತೋಷ್ ಕುಮಾರ್ ಜಿ - Tiger hike in tiger conservation forest of Chamarajanagar
2011 ರಿಂದ 2018ರ ಅವಧಿಯಲ್ಲಿ ಚಾಮರಾಜನಗರದ ಹುಲಿ ಸಂರಕ್ಷಣಾ ಕಾಡಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. 23 ರಿಂದ 25 ರಷ್ಟು ಇದ್ದ ಹುಲಿಗಳು 86ರ ಸಂಖ್ಯೆಯನ್ನು ತಲುಪಿವೆ. ಹುಲಿ ಹಾಗೂ ಆನೆ ಸೇರಿದಂತೆ ವನ್ಯಜೀವಿಗಳ ರಕ್ಷಣೆಯ ಜೊತೆ ಕಾಡನ್ನು ಸಹ ಬೆಂಕಿಯಿಂದ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಸ್ಥಳೀಯ ನಿವಾಸಿಗಳ ಜೊತೆ ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಕಾಡನ್ನೇ ಅವಲಂಬಿಸಿ ಬದುಕುತ್ತಿದ್ದ ಸೋಲಿಗರಿಗೆ ಪರ್ಯಾಯ ಬದುಕಿನ ಮಾರ್ಗ ಕಲ್ಪಿಸಿಕೊಡಲಾಗಿದೆ. ದಿನದಿಂದ ದಿನಕ್ಕೆ ವನ್ಯಜೀವಿಗಳ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ. ಹೊಸ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರತಿನಿಧಿಗೆ ನೀಡಿದ ಸಂದರ್ಶನದಲ್ಲಿ ಚಾಮರಾಜನಗರ ಬಿಆರ್ಟಿ ಹುಲಿ ಸಂರಕ್ಷಿತ ಕಾಡು ನಿರ್ದೇಶಕ ಸಂತೋಷ್ ಕುಮಾರ್ ಜಿ. ತಿಳಿಸಿದ್ದಾರೆ.