ಬಳ್ಳಾರಿಯಲ್ಲಿ ಹೆಚ್ಚಿದ ಕೊರೊನಾ ಸೋಂಕಿತರ ಸಂಖ್ಯೆ... ಗ್ರೌಂಡ್ ರಿಪೋರ್ಟ್ - ಬಳ್ಳಾರಿ ಕೋವಿಡ್ ವರದಿ
ಬಳ್ಳಾರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈವರೆಗೆ ಸುಮಾರು 1,307 ಕೇಸ್ಗಳು ಪತ್ತೆಯಾಗಿದ್ದು, ಜಿಂದಾಲ್ ಕಂಪನಿ ಒಂದರಲ್ಲೇ 479 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ 35 ಮಂದಿ ಸಾವನ್ನಪ್ಪಿದ್ದು, ಭಾನುವಾರ ಹೊಸದಾಗಿ 139 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಈವರೆಗೆ 580 ಮಂದಿ ಗುಣಮುಖರಾಗಿದ್ದು, 692 ಸಕ್ರಿಯ ಪ್ರಕರಣಗಳಿವೆ. ನಿನ್ನೆ ಪತ್ತೆಯಾದ ಸೋಂಕಿತರಲ್ಲಿ ಅಂದಾಜು 20 ಐಎಲ್ಐ ಕೇಸ್ಗಳಾಗಿವೆ. ಈ ಕುರಿತು ನಮ್ಮ ಪ್ರತಿನಿಧಿ ಹೆಚ್ಚಿನ ಮಾಹಿತಿ ನೀಡಿದ್ದಾರೆ.