ತುಂಬಿದ ತುಂಗಭದ್ರಾ: ಹಂಪಿಯ ಹಲವು ಸ್ಮಾರಕಗಳು ಜಲಾವೃತ
ಬಳ್ಳಾರಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಅಂದಾಜು 1.12 ಲಕ್ಷ ಕ್ಯೂಸೆಕ್ ನೀರನ್ನ ಹರಿಬಿಟ್ಟಿದ್ದರಿಂದ ವಿಶ್ವಪ್ರಸಿದ್ಧ ಹಂಪಿಯ ಕೋದಂಡರಾಮ ದೇಗುಲದ ಮೆಟ್ಟಿಲುಗಳವರೆಗೂ ನೀರು ಹರಿದು ಬಂದಿದೆ. ಹಂಪಿಯ ಕೆಲ ಸ್ಮಾರಕಗಳು ಈಗಾಗಲೇ ಮುಳುಗಡೆಯಾಗಿದ್ದು, ಕೋದಂಡರಾಮ ಹಾಗೂ ಯಂತ್ರೋದ್ಧಾರಕ ದೇಗುಲಗಳಿಗೆ ಸಂಪರ್ಕ ಕಲ್ಪಿಸುವ ದಾರಿಯೂ ಕೂಡ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದಲ್ಲದೆ ಕೋದಂಡರಾಮ ದೇಗುಲದ ಬಳಿ ಈಗಾಗಲೇ ಜಲಾಶಯದ ನೀರು ಹರಿದು ಬಂದಿದೆ. ಹೀಗಾಗಿ ದೇಗುಲದ ಬಳಿ ಕಟ್ಟೆಚ್ಚರ ವಹಿಸಲಾಗಿದೆ.