ಸೇನೆಗೆ ಮೊದಲ ಬಾರಿಗೆ ಮಹಿಳಾ ಸಿಪಾಯಿಗಳು : ಭಾರತಾಂಬೆಯ ಸೇವೆಗೆ ನಾರಿಶಕ್ತಿ! - ಭಾರತೀಯ ಸೇನೆ
ಬೆಂಗಳೂರು : ಮೇ 8ಕ್ಕೆ ಭಾರತೀಯ ಸೇನೆಯಲ್ಲಿ ಮೊದಲ ಬಾರಿಗೆ ಸಿಪಾಯಿ ಹುದ್ದೆಯನ್ನು ಮಹಿಳೆಯರು ಅಲಂಕರಿಸುತ್ತಿದ್ದಾರೆ. ಇದರಲ್ಲಿ ಕರ್ನಾಟಕದ 8 ಮಹಿಳೆಯರು ಸೇರಿದ್ದಾರೆ. ಬೆಳಗಾವಿಯ 7 ಹಾಗೂ ಧಾರವಾಡದ ಒಬ್ಬರು ದೇಶ ಸೇವೆಗೆ ಪಣ ತೊಟ್ಟಿದ್ದಾರೆ. ಒಂದೆಡೆ ವೈರಿಗಳ ಎದೆಸೀಳಿ ಬಿಡುತ್ತೇನೆ ಎನ್ನುವ ಅಚಲ ವಿಶ್ವಾಸ. ಮತ್ತೊಂದೆಡೆ ದೇಶ ಸೇವೆ ಮುಖಾಂತರ ನಾನು ಇನ್ಮುಂದೆ ಭಾರತಾಂಬೆಯ ಮಡಿಲಲ್ಲಿ ಕೆಲಸ ಮಾಡುತ್ತಿದ್ದೇನೆ ಅನ್ನೋ ಹುಮ್ಮಸ್ಸು. ಇದರೊಂದಿಗೆ ಯುವಕರಿಗಿಂತ ತಾವೇನು ಕಮ್ಮಿ ಇಲ್ಲ ಅಂತ ಕಠಿಣ ಕಸರತ್ತು ನಡೆಸುತ್ತಿದ್ದಾರೆ.