ಎಸ್ಎಸ್ಎಲ್ಸಿಯಲ್ಲಿ ಹಳ್ಳಿ ಹೈದನ ಸಾಧನೆ... ಸಂತಸ ಹಂಚಿಕೊಂಡ ಈರೇಶ - undefined
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಈರೇಶ ಸಿದ್ದಮಲ್ಲಾ ಜಂಬಗಿ ವಿದ್ಯಾರ್ಥಿ 625ಕ್ಕೆ 622 ಅಂಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾನೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮದ ಲಕ್ಷ್ಮೀ ದೇವಿ ಕನ್ನಡ ಹೈಸ್ಕೂಲ್ ಶಾಲೆಯಲ್ಲಿ ಈರೇಶ ವ್ಯಾಸಂಗ ಮಾಡಿದ್ದಾನೆ. ಕನ್ನಡಕ್ಕೆ 125 ಕ್ಕೆ 125, ಹಿಂದಿ ಹಾಗೂ ಸಮಾಜ ವಿಜ್ಞಾನಕ್ಕೆ 100 ಕ್ಕೆ 100, ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯಕ್ಕೆ 100 ಕ್ಕೆ 99 ಅಂಕ ಪಡೆದು ಒಟ್ಟು 625 ಪೈಕಿ 622 ಅಂಕ ಪಡೆದಿದ್ದಾನೆ. ಗ್ರಾಮೀಣ ಭಾಗದ ಈರೇಶ ಹಳ್ಳಿ ರಾಜ್ಯಕ್ಕೇ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾನೆ.