ಕಲ್ಪತರು ನಾಡಿನಲ್ಲೂ ಮಾದಕ ಗಾಂಜಾ ಜಾಲ... ಪೊಲೀಸ್ ತನಿಖೆಯಿಂದ ಹೊರಬಿತ್ತು ಬೆಚ್ಚಿಬೀಳಿಸುವ ಮಾಹಿತಿ - ತುಮಕೂರು ಗಾಂಜಾ ಮಾರಾಟ ಸುದ್ದಿ
ಒಡಿಶಾದಿಂದ ಸರಬರಾಜು ಆಗುತ್ತಿರೋ ಗಾಂಜಾ ತುಮಕೂರು ನಗರದ ವಿದ್ಯಾರ್ಥಿಗಳನ್ನು ಮಾದಕ ವ್ಯಸನಿಗಳನ್ನಾಗಿ ಮಾಡುತ್ತಿರೋ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳನ್ನೇ ಮುಖ್ಯ ಗುರಿಯಾಗಿಸಿ ಕದ್ದುಮುಚ್ಚಿ ಗಾಂಜಾ ಮಾರಾಟ ಮಾಡ್ತಿದ್ದಾರೆ. ಒಡಿಶಾದ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಯಥೇಚ್ಛವಾಗಿ ಗಾಂಜಾ ಬೆಳೆಯಲಾಗುತ್ತಿದೆ. ಇಲ್ಲಿಂದ ಗಾಂಜಾ ಪೂರೈಕೆ ಮತ್ತು ಮಾರಾಟ ಜಾಲ ಬೆಳೆದು ಅದು ನಗರಕ್ಕೂ ಕಾಲಿಟ್ಟಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆನಗೊಂಡ ಮತ್ತು ಮಾಗಡಿ ತಾಲೂಕಿನಿಂದ ತುಮಕೂರಿಗೆ ಗಾಂಜಾ ಸರಬರಾಜು ಅಗುತ್ತಿದೆ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
Last Updated : Feb 18, 2020, 11:31 PM IST