ಕಾರವಾರದಲ್ಲಿ ಮುಂದುವರೆದ ಮೀನುಗಳ ಅಕ್ರಮ ಬೇಟೆ: ಸ್ಥಳೀಯರಿಂದ ಆಕ್ರೋಶ - illegal fishing in Karwar
ಹವಾಮಾನ ವೈಪರೀತ್ಯ, ಕೊರೊನಾ ಕಾಟದಿಂದಾಗಿ ಈ ಬಾರಿ ಬಹುತೇಕ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಸದ್ಯ ಮೀನುಗಾರಿಕೆಗೆ ತೆರಳುತ್ತಿದರೂ ಮತ್ಸ್ಯ ಕ್ಷಾಮದಿಂದಾಗಿ ಖಾಲಿ ಕೈಯಲ್ಲಿ ಮರಳುತ್ತಿರುವ ಮೀನುಗಾರರು ನಷ್ಟಕ್ಕೊಳಗಾಗಿದ್ದಾರೆ. ಆದರೆ ಇನ್ನೊಂದೆಡೆ ದುರಾಸೆಗೆ ಬಿದ್ದ ಅನ್ಯ ರಾಜ್ಯದ ಮೀನುಗಾರರು ನಿಷೇಧಿತ ಚೌರಿ ಹಾಕಿ ಕಪ್ಪೆ ಬೊಂಡಾಸ್ (ಸ್ಕ್ವಿಡ್ ಫಿಶ್) ಮೀನುಗಳನ್ನು ಅವ್ಯಾಹತವಾಗಿ ಬೇಟೆಯಾಡುತ್ತಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.