ಮೈಸೂರಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಉಡ ಪ್ರತ್ಯಕ್ಷ....ಮುಂದೇನಾಯ್ತು..? - mysoreiguananews
ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಉಡ ನುಗ್ಗಿರುವ ಘಟನೆ ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ಆಯುರ್ವೇದ ಆಸ್ಪತ್ರೆಯಲ್ಲಿ ನಡೆದಿದೆ. ಬೆಳ್ಳಂಬೆಳಗ್ಗೆ ಆಸ್ಪತ್ರೆ ಸ್ವಚ್ಛತಾ ಕಾರ್ಯದ ವೇಳೆ ಉಡ ಪ್ರತ್ಯಕ್ಷವಾಗಿದ್ದು, ಸಿಬ್ಬಂದಿ ಕಣ್ಣಿಗೆ ಬಿದ್ದಿದೆ. ನಂತರ ಉರಗ ಸಂರಕ್ಷಕ ಸೂರ್ಯಕೀರ್ತಿ ಸ್ಥಳಕ್ಕಾಗಮಿಸಿದ್ದಾರೆ. ನಂತರ ಉಡವನ್ನು ಹಿಡಿದು, ರಕ್ಷಿಸಿ ಚಾಮುಂಡಿ ಬೆಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.