ಕೆಲ ನಿಯಮಗಳ ಉಲ್ಲಂಘನೆ ಹಿನ್ನೆಲೆ ಲಾಠಿ ಪ್ರಹಾರ ನಡೆದಿದೆ : ಐಜಿಪಿ ಶರತ್ ಚಂದ್ರ ಸ್ಪಷ್ಟನೆ - ಕೋಲಾರ ಲಾಠಿ ಪ್ರಹಾರ ಸುದ್ದಿ
ಕೋಲಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬೃಹತ್ ಸಭೆ ವೇಳೆ ನಡೆದ ಲಘು ಲಾಠಿ ಪ್ರಹಾರದ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ವಲಯ ಐಜಿಪಿ ಶರತ್ ಚಂದ್ರ, ಕೆಲ ನಿಯಮಗಳ ಉಲ್ಲಂಘನೆ ಹಿನ್ನೆಲೆ ಲಾಠಿ ಪ್ರಹಾರ ನಡೆದಿದೆ. ಪೊಲೀಸರು ನೀಡಿದ ನಿಯಮಗಳನ್ನು ಒಪ್ಪಿದ ಬಳಿಕ ಬಹಿರಂಗ ಸಭೆಗೆ ಅನುಮತಿ ನೀಡಲಾಗಿತ್ತು. ಆದರೆ ಮೆರವಣಿಗೆಗಳನ್ನ ನಿಷೇಧಿಸಲಾಗಿತ್ತು. ಅತಿ ಸೂಕ್ಷ್ಮ ಪ್ರದೇಶದಲ್ಲಿ ರ‍್ಯಾಲಿ ನಡೆಸಲು ಮುಂದಾಗಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು ಎಂದು ತಿಳಿಸಿದರು.